Amtady Primary Agricultural Credit Cooperative Society Ltd is registered as co- operative society registered under Karnataka Co-operative Society Act 1959.
The Society has given top priority for financing Agricultural sector since inception by taking into consideration various credit needs of the farmers. It is serving farmers by providing timely & adequate finance at the ground level. The society is taking active participation in the all sponsored schemes from central and state Government.
We issued 616, Kissan Credit Card Loans to the members of the our PACS out of which Members have been covered under personal accident insurance schemes. A sum of Rs. 115352000.00 has been advanced under this scheme during the year 2023-24. The Borrower under crop loans is also covered by crop insurance scheme sponsored by the Government.PACS Financed Rs 42592600.00f or Agricultural Development Loan. With a view to diversify the activities, Society has also financed Rs. 208604337.00 crores to non-farm sector.
The PACS has not lagged behind in customer service, by computerizing all its Branches and by introducing several innovative service activities like customer can withdraw or credit from any of our Branch, it means Any Branch Banking, RTGS/NEFT,/Micro Atm/AEPS , facilities is there.
Banking on wheels - This Society is inter connected with all Branches of the Bank through Any Branch Banking facility.
As on 31-03-2024, the PACS has mobilized Rs. 403086430.92 of Deposit, Rs.366548937.00 loan outstanding, out of which Rs. 115352000.00 under S.T. Agricultural, Rs.42592600.00 under M.T. Agricultural and Rs. 208604337.00 crores under Non-Agricultural. The Bank Advances loans to various purposes as per the needs of borrower like vehicle, housing, commercial complex, pledging of jewels, consumer durables and agricultural land purchase.
The Management of the PACS is vested with Board of Directors consisting of 13 members under the presidentship of the veteran Co-operator Smt MALLIKA V SHETTY.
ಆತ್ಮೀಯ ಸಹಕಾರಿ ಮಿತ್ರರೇ,
“ಸಾಧನೆ”ಯ ಮಹಾಪೂರದೊಂದಿಗೆ ಸಹಕಾರ ಕ್ಷೇತ್ರಕ್ಕೆ ಆದರ್ಶವಾಗಿರುವ “ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ” ವೈವಿಧ್ಯಮಯ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಸಮಸ್ತ ರೈತಾಪಿ ವರ್ಗದ ಹಾಗೂ ಗ್ರಾಹಕರ ಸೇವೆಯಲ್ಲಿ ಜನಮನ್ನಣೆಯನ್ನು ಗಳಿಸಿ ಜನಸ್ನೇಹಿ ಸಂಘ ಎನ್ನುವ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿರುವ ನಮ್ಮ ಸಂಘ ಸಹಕಾರ ರಂಗದಲ್ಲಿ ವಿಶಿಷ್ಟ, ವಿನೂತನ ಸಾಧನೆಯೊಂದಿಗೆ ಅತ್ಯುತ್ತಮ ಕೃಷಿ ಪತ್ತಿನ ಸಹಕಾರ ಸಂಘ ಆಗಿ ಜನಾನುರಾಗಿಯಾಗಿದೆ.
“ಸಹಕಾರ ತತ್ವ”ದ ಮೂಲ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಾಧನೆಯ 47 ವರ್ಷಗಳನ್ನು ಪೂರೈಸಿ ಅಭಿವೃದ್ಧಿಯ ಮುಂಚೂಣಿಯಲ್ಲಿದೆ. ವರದಿ ವರ್ಷದಲ್ಲಿ ಸಂಘ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಿ ಸಾಧಿಸಿದ ಯಶಸ್ಸು ಅಪೂರ್ವವಾದದ್ದು ಈ ಯಶಸ್ಸಿನ ಮೂಲ ಸೆಲೆಗೆ ಗೌರವಾನ್ವಿತರಾದ ನಮ್ಮ ಸಂಘದ ಸದಸ್ಯರು ಕಾರಣಕರ್ತರು ಎನ್ನುವುದನ್ನು ಸ್ಮರಿಸುತ್ತೇನೆ.
ನಮ್ಮ ಸಂಘವು ಸರಕಾರದ ಆದೇಶದ ಪ್ರಕಾರ ಅಮ್ಟಾಡಿ ಸೇವಾ ಸಹಕಾರ ಸಂಘ, ಕುರಿಯಾಳ ಸೇವಾ ಸಹಕಾರ ಸಂಘ ಹಾಗೂ ಕಳ್ಳಿಗೆ ಸೇವಾ ಸಹಕಾರ ಸಂಘ ವಿಲೀನಗೊಂಡು ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಸಂಘವೆAಬ ಹೆಸರಿನಲ್ಲಿ ದಿನಾಂಕ 04-09-1976ರಂದು ಅಸ್ತಿತ್ವಕ್ಕೆ ಬಂದಿದೆ. ಈಗ ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಸಂಘ 47 ಸಹಕಾರಿ ವರ್ಷಗಳನ್ನು ಪೂರೈಸಿ 48 ನೇ ವರ್ಷಕ್ಕೆ ಕಾಲಿರಿಸಿದೆ. ನಮ್ಮ ಸಂಘದ ಕಾರ್ಯವ್ಯಾಪ್ತಿಗೆ ಅಮ್ಟಾಡಿ, ಕಳ್ಳಿಗೆ, ತುಂಬೆ ಹಾಗೂ ಕುರಿಯಾಳ ಈ 4 ಗ್ರಾಮಗಳು ಒಳಪಟ್ಟಿವೆ.
ಸಾರ್ವಜನಿಕ ಸೇವೆಯಲ್ಲಿ ಸುದೀರ್ಘ ಕಾಲ ಗುರುತಿಸಿಕೊಂಡಿರುವ ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವರದಿ ವರ್ಷದಲ್ಲಿ ಎಲ್ಲಾ ವ್ಯವಹಾರಗಳಲ್ಲೂ ಗುರಿ ಮೀರಿದ ಸಾಧನೆಯನ್ನು ಮಾಡಿದೆ. 31.03.2024ಕ್ಕೆ ಅಂತ್ಯಗೊAಡ ಆರ್ಥಿಕ ವರ್ಷದಲ್ಲಿ ಸಂಘ ರೂ. 1.02 ಕೋಟಿ ಲಾಭ ಗಳಿಸಿರುವುದು ಪ್ರಗತಿಯ ಸಂಕೇತವಾಗಿದೆ. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಿಯೂ ಸಂಘ ಗರಿಷ್ಠ ಲಾಭ ಗಳಿಸಿ ಸಾಧನೆಯ ಪಥದಲ್ಲಿದೆ.
ರೈತರ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘ ವರದಿ ವರ್ಷದಲ್ಲಿ ರೂ. 223.26 ಕೋಟಿಗಳ ಒಟ್ಟು ವ್ಯವಹಾರ ದಾಖಲಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಇತರ ಬ್ಯಾಂಕ್, ಸಹಕಾರ ಸಂಘಗಳೊAದಿಗೆ ಠೇವಣಿ ಸಂಗ್ರಹಣೆಯಲ್ಲಿ ಪೈಪೋಟಿ ಇದ್ದರೂ ನಮ್ಮ ಸಂಘ ಒಟ್ಟು ರೂ.40.30 ಕೋಟಿ ಸಂಗ್ರಹಿಸಿದೆ.
ಸ್ಪರ್ಧಾತ್ಮಕ ಆರ್ಥಿಕ ಹಿನ್ನಲೆಯಲ್ಲಿಯೂ ಸಂಘ ಆರ್ಥಿಕ ವರ್ಷದಲ್ಲಿ ಸೇವಾ ಬದ್ಧತೆಯನ್ನು ಮೆರೆದು ರೂ.36.65 ಕೋಟಿ ಸಾಲ ನೀಡಿದೆ. 4889 ಜನರು ಸಂಘದ ಸದಸ್ಯರಾಗಿದ್ದು ಪಾಲು ಬಂಡವಾಳ ರೂ.2.49 ಕೋಟಿ, ಸಂಘದÀ ದುಡಿಯುವ ಬಂಡವಾಳ ರೂ.50.71 ಕೋಟಿ. ಸಂಘ ರೂ. 1.62 ಕೋಟಿ ವಿವಿಧ ನಿಧಿಗಳನ್ನು ಹೊಂದಿರುತ್ತದೆ.
ಮಾನ್ಯ ಸದಸ್ಯರೆಲ್ಲರ ಮತ್ತು ಸಿಬ್ಬಂದಿಯವರ ಸಹಕಾರದಿಂದ ಸಂಸ್ಥೆಯು ಆಡಿಟ್ ವರ್ಗೀಕರಣದಲ್ಲಿ 'ಎ' ತರಗತಿಯ ಸ್ಥಾನಮಾನ ಪಡೆದಿದ್ದು ಸಾಲ ವಸೂಲಾತಿಯಲ್ಲಿ ಶೇಕಡ 99.30% ಪ್ರಗತಿಯನ್ನು ದಾಖಲಿಸಿರುತ್ತದೆ. ಈ ಸಾಧನೆ ಶೇಕಡಾ 100 ಕ್ಕೆ ತಲುಪಲಿ ಎಂಬ ಆಶಯದೊಂದಿಗೆ ಹಿಂದಿನ ಸಾಲಿನ ಸಾಧನೆಗೆ ಹೆಮ್ಮೆ ಪಡುತ್ತಾ ತಮ್ಮೆಲ್ಲರನ್ನು ಹಾರ್ಧಿಕವಾಗಿ ಅಭಿನಂದಿಸುತ್ತೇನೆ.
ಈ ಎಲ್ಲಾ ಸಾಧನೆಯಲ್ಲಿ ಸಹಕರಿಸಿದ ಮಾನ್ಯ ಸದಸ್ಯರು, ಗ್ರಾಹಕರು, ಠೇವಣಿದಾರರು, ಕ್ರೀಯಾಶೀಲ ಸಿಬ್ಬಂದಿವರ್ಗದವರಿಗೂ ಆಡಳಿತ ಮಂಡಳಿ ಪರವಾಗಿ ಹಾಗೂ ನನ್ನ ವೈಯಕ್ತಿಕ ನೆಲೆಯಲ್ಲಿ ಹೃತೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ನಮ್ಮ ಸಂಸ್ಥೆಯ ಸಾಧನೆಯ ದಾರಿಯಲ್ಲಿ ಇನ್ನಷ್ಟು ಮುನ್ನಡೆಯಬೇಕು. ಅದಕ್ಕಾಗಿ ಸರ್ವರೂ ಸಂಘದಲ್ಲಿಯೇ ಠೇವಣಿದಾರರಾಗಿ, ಸಾಲ ಸೌಲಭ್ಯಗಳ ಸದುಪಯೋಗ ಪಡಕೊಂಡು, ಪಡೆದ ಸಾಲಗಳನ್ನು ಸಕಾಲದಲ್ಲಿ ಮರುಪಾವತಿಸಿ ಸಂಸ್ಥೆಯನ್ನು ಪ್ರಗತಿ ಪಥದಲ್ಲಿ ಸಾಗಿಸಲು ಪರಸ್ಪರ ಕೈ ಜೋಡಿಸೋಣ.
ಶ್ರಿಮತಿ ಮಲ್ಲಿಕಾ ವಿ ಶೆಟ್ಟಿ
ಅಧ್ಯಕ್ಷರು